ನಿರಂತರವಾಗಿ ಕೇಳಲಾಗುವ ಪ್ರಶ್ನೆಗಳು

1. “ಮಹಾಪ್ರಸಾದ” ಎಂದರೇನು, ಅದರಲ್ಲೇನಿದೆ ?

ಮಹಾಪ್ರಸಾದವು ಬ್ರಹ್ಮಪುತ್ರ, ಪ್ರಾಣಹಿತ, ಸಿಂಧು, ಗಂಡಕಿ, ಭೀಮರತಿ, ಪೂರ್ಣ, ತಾಮರಭರಣಿ, ಗೋದಾವರಿ, ಕಾವೇರಿ, ಸರಸ್ವತಿ, ತುಂಗಭದ್ರಾ, ಕೃಷ್ಣ, ಗಂಗಾ, ಸರಯೂ, ಯಮುನಾ ಮತ್ತು ನರ್ಮದಾ-16 ಭಾರತದ ಪವಿತ್ರ ನದಿಗಳ ಉಗಮ ಸ್ಥಾನದಿಂದ ಸಂಗ್ರಹಿಸಿದ ನೀರು ಮತ್ತು ಮರಳನ್ನು ಒಳಗೊಂಡಿದೆ. ಅದರೊಂದಿಗೆ ಭಗವಾನ್ ಶ್ರೀರಾಮನ ಪಾದುಕೆಗಳು, ಪಟ್ಟಾಭಿ ರಾಮನ ಸುಂದರವಾದ ಚಿತ್ರ, ಅರಿಶಿನ-ಕುಂಕುಮ, ಮತ್ತು ಸಣ್ಣ ದೀಪಗಳೂ ಇವೆ (*ಕೆಲವು ಪೆಟ್ಟಿಗೆಗಳಲ್ಲಿ).

ಇವೆಲ್ಲವುಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾದ ಪೆಟ್ಟಿಗೆಯಲ್ಲಿ ಇರಿಸಲಾಗಿದೆ. ಇದು ಜಗದ್ಗುರುಗಳು ಮತ್ತು ಅನೇಕ ಕುಟುಂಬಗಳ, ಶಾಲೆಗಳ, ಕಾಲೇಜುಗಳ, ಸಂಘ – ಸಂಸ್ಥೆಗಳ, ಟ್ರಸ್ಟ್ ಗಳ, ಕಂಪನಿಗಳ, ಅಂಗಡಿಗಳ, ಮುಂತಾದ ವ್ಯಾಪಾರ ಕೇಂದ್ರಗಳ ಪೂಜೆಯನ್ನು ಪಡೆದುಕೊಂಡಿದೆ. ತರಂಗಿಣಿ ಆ್ಯಪ್ ಮೂಲಕ ನೋಂದಾಯಿಸಿದವರ ಮನೆಗಳಿಗೆ ಮಹಾಪ್ರಸಾದವನ್ನು ಒಳಗೊಂಡ ವಾಹನದಲ್ಲಿ ನಮ್ಮ ಸಿಬ್ಬಂದಿವರ್ಗವು ತಲುಪುತ್ತದೆ. ಅಲ್ಲಿ ಸಕಲ ಗೌರವಾದರಗಳಿಂದ ಸ್ವಾಗತಿಸಲ್ಪಟ್ಟು, ಮೊದಲೇ ಸಿದ್ಧಪಡಿಸಿದ ಪೀಠದ ಮೇಲೆ ಪ್ರತಿಷ್ಠಾಪಿಸಿ, ಪೂಜಿಸಲಾಗುತ್ತದೆ. ಮನೆಯವರು, ನೆರೆಹೊರೆಯವರು, ಸ್ನೇಹಿತರು ಸೇರಿ ಪೂಜೆಯನ್ನು ಮಾಡಿ, ನಾಮಸಂಕೀರ್ತನೆಗಳನ್ನು- ಭಜನೆಗಳನ್ನು ಮಾಡುತ್ತಾರೆ, ನಂತರ, ಮಹಾಮಂಗಳಾರತಿಯೊಂದಿಗೆ ಬೇಳ್ಕೊಡುತ್ತಾರೆ.

ಹೀಗೆ ಭಾವೈಕ್ಯತೆಯಿಂದ, ಎಲ್ಲೆಡೆಯೂ ರಾಮನಾಮದ ಹಿರಿಮೆಯನ್ನು ತರಂಗಗಳಂತೆ ಹರಡುತ್ತಾ ಪ್ರತಿಧ್ವನಿಸುತ್ತಾ, ಅಯೋಧ್ಯೆಯ ಶ್ರೀರಾಮನ ನಿವಾಸದ ತನ್ನ ಗಮ್ಯದೆಡೆಗೆ ಸಾಗುತ್ತದೆ.

ನಮ್ಮೊಂದಿಗೆ ನಿರಂತರ ಸಂಪರ್ಕದೊಂದಿಗಿರಲು ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ :

https://www.facebook.com/taranginikannada

2. ನೀರು ಮತ್ತು ಮರಳಿನ ಸಂಕೇತವೇನು?
 1. ಹಿಂದೂ ಧರ್ಮಗ್ರಂಥಗಳ ಪ್ರಕಾರ ನದಿ ನೀರನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಎಲ್ಲಾ ಸಮಾರಂಭಗಳು ಮತ್ತು ಆಚರಣೆಗಳ ಭಾಗವೂ ಆಗಿದೆ. ನದಿಗಳನ್ನು ದೇವತೆಗಳೆಂದು ಆರಾಧಿಸಲಾಗುತ್ತದೆ.
 2. ನದತೀರವೇ ಹಲವಾರು ನಾಗರೀಕತೆಗಳ ತವರು, ಮನುಕುಲದ ಏಳಿಗೆಗೆ ನದಿಗಳೇ ಏಕೈಕ ಸಾಕ್ಷಿಯಾಗಿದೆ.
 3. ಜೀವ ಸಂಜೀವಿನಿಯಾದ ನದಿಗಳು ಹಲವಾರು ಜೀವರಾಶಿಗಳಿಗೆ ಜೀವನಾಧಾರವಾಗಿದೆ. ಅಲ್ಲದೇ ಅಸಂಖ್ಯಾತ ಪುಣ್ಯಕ್ಷೇತ್ರಗಳ ನೆಲೆವೀಡಾಗಿ ಪಾವನವಾಗಿದೆ.
 4. ರಾಮ, ಕೃಷ್ಣ, ಗೋವಿಂದ ಮುಂತಾದ ಅವತಾರ ಪುರುಷರ ಹಜ್ಜೆಗುರುತಿನಿಂದ, ಅನೇಕ ಸಾಧು-ಸಂತರು, ಗುರುಗಳ ಪಾದಸ್ಪರ್ಶದಿಂದ ಪವಿತ್ರವೂ ಆಗಿದೆ.
 5. ಇವುಗಳ ಆರಾಧನೆಯಿಂದ ಸಕಾರಾತ್ಮಕತೆ, ಶಾಂತಿ ಮತ್ತು ಯೋಗಕ್ಷೇಮವು ದೊರಕುತ್ತದೆ.
3. ಮಹಾಭಿಯಾನವು ಹೇಗೆ ಮತ್ತು ಎಲ್ಲಿ ಪ್ರಾರಂಭವಾಯಿತು?

ಶೃಂಗೇರಿ ಜಗದ್ಗುರುಗಳ ಪರಿಕಲ್ಪನೆ ಮತ್ತು ಆಶೀರ್ವಾದದೊಂದಿಗೆ ಈ ಮಹಾ ಭಿಯಾನಕ್ಕೆ ಚಾಲನೆ ನೀಡಲಾಯಿತು. ಇದನ್ನು ಹನುಮನ ಜನ್ಮಸ್ಥಳವಾದ ಅಂಜನಾದ್ರಿ ಯಿಂದ ಪ್ರಾರಂಭಿಸಿ, ಜಗದ್ಗುರುಗಳಿಂದ ಮೊದಲ ಪೂಜೆ ಪಡೆದು, ಒಂದು ಕೋಟಿ ಮನೆಗಳ ಪ್ರಾರ್ಥನೆಗಳನ್ನು ಭಗವಂತನಿಗೆ ತಲುಪಿಸಲು ರಾಮಜನ್ಮಭೂಮಿಯೆಡೆಗೆ ಸಾಗುವ ಪ್ರಯಾಣವು ಪ್ರಾರಂಭವಾಯಿತು.

4. ಮಹಾಭಿಯಾನದ ಮೂಲಕ ಏನನ್ನು ನಿರೀಕ್ಷಿಸಬಹುದು??

ಮಹಾಪ್ರಸಾದದ ಪೂಜೆಗಾಗಿ ನೋಂದಾಯಿಸಿರುವ ಭಕ್ತರಿಗೆ, ನಾವು ದೂರವಾಣಿ ಕರೆ ಮೂಲಕ, ದಿನ ಮತ್ತು ಸಮಯವನ್ನು ಗೊತ್ತುಪಡಿಸಿ, ಆ ನಿಗದಿತ ಸಮಯಕ್ಕೆ ಮಹಾಪ್ರಸಾದದ ವಾಹನದೊಂದಿಗೆ ಭಕ್ತರ ಮನೆ ಬಾಗಿಲಿಗೆ ನಮ್ಮ ತಂಡ ಆಗಮಿಸುತ್ತದೆ, ಆರತಿ ಮೂಲಕ ಮಹಾಪ್ರಸಾದವನ್ನು ಸ್ವಾಗತಿಸಿ, ಪ್ರತ್ಯೇಕವಾಗಿ ಅಲಂಕೃತಗೊಂಡು ನಿರ್ಮಿಸಲಾದ ಪೀಠದ ಮೇಲೆ ಅದನ್ನು ಸ್ಥಾಪಿಸಿ, ಕುಟುಂಬವರ್ಗ, ನೆರೆಹೊರೆಯವರೊಂದಿಗೆ ಕೂಡಿ ಪೂಜೆ, ಸಂಕಲ್ಪಗಳನ್ನು ಸ್ವೀಕರಿಸಲಾಗುತ್ತದೆ.

ಹೀಗೆ ಹಲವಾರು ಮಹನೀಯರಿಂದ ಪೂಜೆಯನ್ನು ಪಡೆದು, ಸಹಸ್ರಾರು ಮನೆಗಳ ಒಳಹೊಕ್ಕು ಪೂಜೆ-ಸಂಕಲ್ಪಗಳನ್ನು ಪಡೆದು ಸಾಗುವ ಮಹಾಪ್ರಸಾದವು ತನ್ನೊಂದಿಗೆ ಅಗಾಧ ಸಕಾರಾತ್ಮಕತೆಯನ್ನು ಪಡೆದುಕೊಂಡಿರುತ್ತದೆ. ಇದನ್ನು ಮಹಾಭಿಯಾನದಲ್ಲಿ ಪಾಲ್ಗೊಳ್ಳುವ ಇತರರಿಗೂ ಹಂಚುತ್ತಾ ಅವರ ಸಂಕಲ್ಪಗಳನ್ನೂ ಭಗವಂತನಿಗೆ ತಲುಪಿಸುವ ಮೂಲಕ ಧನ್ಯತೆಯನ್ನು ತರುತ್ತದೆ.

5. ಮಹಾಭಿಯಾನದಲ್ಲಿ ಭಾಗವಹಿಸುವುದು ಹೇಗೆ??

ಗೂಗಲ್ ಪ್ಲೇ ಸ್ಟೋರ್ ನ “ತರಂಗಿಣಿ ಆ್ಯಪ್” ನಲ್ಲಿ ತಮ್ಮ ಹೆಸರನ್ನು ನೋಂದಾಯಿಸುವ ಮೂಲಕ, ಮಹಾಭಿಯಾನವನ್ನು ನಿಮ್ಮಲ್ಲಿಗೆ ಆಹ್ವಾನಿಸುವಿರಿ. ನೋಂದಣಿಗೆ ಯಾವುದೇ ಶುಲ್ಕಗಳಿಲ್ಲ. ಒಂದು ಕೋಟಿ ಕುಟುಂಬಗಳ ಪೂಜೆ ಪಡೆಯುವುದೊಂದೇ ಇದರ ಸದುದ್ದೇಶ. ನಿಮ್ಮ ಶಕ್ತ್ಯಾನುಸಾರ ಮಹಾಭಿಯಾನದಲ್ಲಿ ಭಾಗವಹಿಸಬುಹದು.

6. ಸಾಂಕೇತಿಕ ಚಿಕಣಿ ಯಾವುದು?

ಭಕ್ತರು ತಮ್ಮ ದೈನಂದಿನ ಪೂಜೆಗಾಗಿ ಈ ಉತ್ಪನ್ನವನ್ನು ಖರೀದಿಸಲು ಬಯಸಿದರೆ, ಬೆಳ್ಳಿಯ ಅಥವಾ ಕಂಚಿನ ಸಣ್ಣ ಗಾತ್ರದ (ಬೃಹತ್ ಪೆಟ್ಟಿಗೆಯ ಪ್ರತಿರೂಪ) ಚಿಕಣಿ ಯನ್ನು ವಿನ್ಯಾಸಗೊಳಿಸಲಾಗಿದೆ.ಈ ಉತ್ಪನ್ನವನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ: https://sriramamritatarangini.com/

7. ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವುದು ಹೇಗೆ?

ಗೂಗಲ್ ಪ್ಲೇ ಸ್ಟೋರ್ಗೆ ಹೋಗಿ ಮತ್ತು “ತರಂಗಿಣಿ” ಅಪ್ಲಿಕೇಶನ್ ಡೌನ್ಲೋಡ್ ಮಾಡಿ.

8. ಕೊಡುಗೆಗಳನ್ನು ನೀಡುವ ವಿಧಾನ ಹೇಗೆ?
 1. ದೇಣಿಗೆ ನೀಡಲಿಚ್ಛಿಸುವ ಭಕ್ತರಿಗೆ,ಈ ಕಾರ್ಯಾಗಾರದ ಕುರಿತ ಹೆಚ್ಚಿನ ಮಾಹಿತಿ, ಮಾರ್ಗದರಶನ ನೀಡಿ ಅಥವಾ ಪಾವತಿ ಮಾಡುವ ಲಿಂಕ್ ಗಳನ್ನು ಅವರಿಗೆ ರವಾನಿಸುವ ಮೂಲಕ,
 2. ಇತರರಿಗೆ ಅವರ ಮನೆಗಳಲ್ಲಿ ಅಥವಾ ವ್ಯಾಪಾರ ಸ್ಥಳಗಳಲ್ಲಿ ಪೂಜೆಯನ್ನು ಸಲ್ಲಿಸಲು ಸಲಹೆ ನೀಡುವ ಮೂಲಕ,
 3. ನಮ್ಮ ಸಿಬ್ಬಂದಿಗೆ ವಸತಿ ಒದಗಿಸುವ ಮೂಲಕ,
 4. ಮಹಾಪ್ರಸಾದ ಹೊತ್ತು ಸಾಗುವ ನಮ್ಮ ಮುಂದಿನ ಪ್ರಯಾಣದಲ್ಲಿ ಸಹಾಯ ಮಾಡುವ ಮೂಲಕ
 5. ಮಹಾಯಾಗದ ಸಮಯದಲ್ಲಿ ವ್ಯವಸ್ಥೆಗಳನ್ನು ಪ್ರಾಯೋಜಿಸುವುದು ಮತ್ತು ಇತ್ಯಾದಿಗಳ ಮೂಲಕ ಕೊಡುಗೆಗಳನ್ನು ನೀಡಬಹುದು.
9. ಮಹಾಯಾಗದ ಕಡೆಗೆ ವಿವಿಧ ರೀತಿಯ ಕೈಂಕರ್ಯಗಳು ಅಥವಾ ಸೇವೆಯ ವಿಧಾನಗಳು ಯಾವುವು?

ಶ್ರೀರಾಮ ಪಾರಾಯಣ, ನೃತ್ಯ-ನಾಟಕ, ಸ್ಕಿಟ್, ರಂಗೋಲಿ, ಕಾರ್ಟೂನ್ ಕಲೆ, ಚಿತ್ರಕಲೆ, ನಿಮ್ಮೂರಿನ ರಾಮ ಮಂದಿರದಲ್ಲಿ ನಡೆಸುವ ಭಜನೆಗಳು, ನಾಮಸಂಕೀರ್ತನೆಗಳು, ಮೆಹಂದಿ ಕಲೆ, ಟ್ಯಾಟೂಗಳು, ಥರ್ಮಾಕೋಲ್ ಕಲಾಕೃತಿ, ರಾಮಕೀರ್ತಿ ಸಾರುವ ಇತ್ಯಾದಿ ಆಚರಣೆಗಳ ಮಾಹಿತಿಯನ್ನು ನಮಗೆ [email protected] ಗೆ ಮೇಲ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದು.

10. ನವೀಕರಣಗಳಿಗಾಗಿ

ಮಹಾಭಿಯಾನಕ್ಕೆ ಈಗ ಎಷ್ಟು ಮಂದಿ ನೋಂದಾಯಿಸಿದ್ದಾರೆ, ಎಷ್ಟು ಮನೆಗಳಲ್ಲಿ ಪ್ರಾರ್ಥನೆ ಸ್ವೀಕರಿಸಲಾಗಿದೆ, ಈಗ ಯಾತ್ರೆ ಎಲ್ಲಿ ಸಾಗುತ್ತಿದೆ? ಮುಂತಾದ ಲೈವ್ ಅಪ್ ಡೇಟ್ ಗಳು ತರಂಗಿಣಿ ಆ್ಯಪ್ ನಲ್ಲಿ ಸಿಗುತ್ತದೆ.

11. ಮಹಾಪ್ರಸಾದದ ಚಿಕಣಿಯನ್ನು ಮನೆಯಲ್ಲಿಟ್ಟು ನಿಯಮಿತವಾಗಿ ಪೂಜೆಯನ್ನು ಮಾಡುವುದು ಹೇಗೆ?
 1. ಪೆಟ್ಟಿಗೆಯನ್ನು ಸ್ವೀಕರಿಸಿದ ನಂತರ, ನಿಮ್ಮ ಪೂಜಾ ಕೋಣೆಯಲ್ಲಿ ಸ್ಥಾಪಿಸಲು ಉತ್ತಮ ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ.
 2. ಕಂಚಿನ ಅಥವಾ ಬೆಳ್ಳಿಯ ತಟ್ಟೆಯಲ್ಲಿ ಚಿಕಣಿಯ ಪರಿಕರಗಳನ್ನು ಜೋಡಿಸಿ ಅದನ್ನು ಪೀಠದ ಮೇಲೆ ಇರಿಸಬಹುದು.
 3. ಹೂವುಗಳಿಂದ ಅಲಂಕರಿಸಿ, ರಾಮ ಮಂತ್ರಗಳನ್ನು ಪಠಿಸುವುದರೊಂದಿಗೆ ನದಿಗಳಿಗೆ ಮತ್ತು ಶ್ರೀ ರಾಮ ಪಾದುಕೆಗಳಿಗೆ ನಿಮ್ಮ ಪೂಜೆ ಪ್ರಾರ್ಥನೆಗಳನ್ನು ನಿಯಮಿತವಾಗಿ ಸಲ್ಲಿಸಬಹುದು.
12. ದೇಣಿಗೆಗಳನ್ನು ಹೇಗೆ ಮತ್ತು ಎಲ್ಲಿ ಕೊಡಬೇಕು?

ಮಹಾಭಿಯಾನದ ಯಶಸ್ಸಿಗೆ ದಾನಕೊಡುಗೆಗಳನ್ನು ನೀಡಬಯಸುವವರು, ಕೆಳಗಿನ ಉಲ್ಲೇಖಿಸಿರುವ ಬ್ಯಾಂಕ್ ಖಾತೆಗೆ ಕಳುಹಿಸಿಕೊಡಬಹುದು. ದಾನಕೊಡುಗೆ ಕುರಿತ ಹೆಚ್ಚಿನ ವಿವರಗಳಿಗೆ ಭೇಟಿ ನೀಡಿ: [email protected]

ಪಾವತಿ ವಿವರಗಳು
IN FAVOUR OF SRI RAMAMRITA TARANGINI TRUST
BANK UNION BANK OF INDIA
BRANCH RAJAMAHAL VILAS EXTN, B'LORE BRANCH, BANGALORE URBAN-560094
ACCOUNT NO. 058221010000016
IFSC CODE UBIN0905828
SWIFT CODE UBININBBPEE
13. 80G benefits

ABDTS4355GE20211 ABDTS4355GF2022701

14. ಮಹಾಪ್ರಸಾದದ ಚಿಕಣಿಯನ್ನು ಹೊಂದಲು ಮತ್ತು ಅದಕ್ಕೆ ತಮ್ಮ ಮನೆಯಲ್ಲಿ ನಿತ್ಯ ಪೂಜೆಯನ್ನು ಮುಂದುವರಿಸಲು ಬಯಸುವ ಭಕ್ತರಿಗೆ ಹೇಗೆ ಪ್ಯಾಕ್ ಮಾಡಿಕೊಡಲಾಗುತ್ತದೆ?

ಸಂಗ್ರಹಿಸಿ ತಂದ ನದಿ ನೀರನ್ನು ನಮ್ಮ ಕಚೇರಿಯಲ್ಲಿ ಗೌರವಾದರದಿಂದ ಸ್ವೀಕರಿಸಿ ನಿಗದಿತ ಪೆಟ್ಟಿಗೆಯಲ್ಲಿಟ್ಟು ಪ್ಯಾಕ್ ಮಾಡಲಾಗುತ್ತದೆ. ಶುದ್ಧೀಕರಣಕ್ಕಾಗಿ ಮತ್ತು ಕಂಪನಗಳನ್ನು ತುಂಬಲು ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ನಂತರ ಅದನ್ನು ಕಾದಿರಿಸಿದ ಜನರಿಗೆ ಕಳುಹಿಸಲಾಗುತ್ತದೆ. ಪ್ಯಾಕಿಂಗ್ ಮತ್ತು ರವಾನೆಯಲ್ಲಿ ವಿಶೇಷ ಕಾಳಜಿಯನ್ನು ವಹಿಸಲಾಗುತ್ತದೆ.

15. ಭಕ್ತರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸವುದು ಹೇಗೆ?

ಭಕ್ತರ ಮುಕ್ತ ವೇದಿಕೆಯಾದ, [email protected] ಗೆ, ಇಮೇಲ್ ಐಡಿಗೆ ಶ್ರೀರಾಮನ ಕುರಿತ ತಮ್ಮ ಅನಿಸಿಕೆಗಳನ್ನು ಬರೆಯಬಹುದು ಮತ್ತು ಭಗವಾನ್ ಶ್ರೀರಾಮನ ಬಗ್ಗೆ ತಮ್ಮ ಆಧ್ಯಾತ್ಮಿಕ ಅನುಭವಗಳನ್ನು ಹಂಚಿಕೊಳ್ಳಬಹುದು, ನಿಮ್ಮ ಮೇಲೆ ಪ್ರಭಾವ ಬೀರಿರುವ ಶ್ರೀರಾಮನ ಮೌಲ್ಯಗಳ ಬಗ್ಗೆ, ರಾಮನ ಸಂಪರ್ಕ ಹೊಂದಿದ ಸ್ಥಳಗಳ ಬಗ್ಗೆ ಬರೆಯಬಹುದು, ಮಕ್ಕಳಿಗೆ ರಾಮಾಯಣ ಪಾತ್ರಗಳ ವೇಷಭೂಷಣ ಮತ್ತು ಅಲಂಕಾರಗಳನ್ನು ಮಾಡಿ ಚಿತ್ರೀಕರಿಸಿದ ವಿಡಿಯೋ ತುಣುಕುಗಳನ್ನು ಕಳುಹಿಸಿ ಕೊಡಿ. ರಾಮನಿಗೆ ಸಂಬಂಧಿಸಿದ ಕಥೆಗಳು, ರಾಮನ ವಂಶಾವಳಿ – ಸಂತತಿಯ ಬಗ್ಗೆ ನಿಮಗೆ ತಿಳಿದಿರುವ ಅನೇಕ ಇನ್ನಿತರ ವಿಷಯಗಳನ್ನು ಹಂಚಿಕೊಳ್ಳಬಹುದು.

16. ನವೀಕರಣಕ್ಕಾಗಿ

ದೈನಂದಿನ ನವೀಕರಣಗಳನ್ನು https://sriramamritatarangini.com/ಗೆ ಭೇಟಿನೀಡಿ ಪಡೆದುಕೊಳ್ಳಿ.

- Disclaimer
ಹಕ್ಕು ನಿರಾಕರಣೆ ಎಚ್ಚರಿಕೆ:

ನೀವು ಕರೆ ಅಥವಾ ಅಪ್ಲಿಕೇಶನ್ನಲ್ಲಿ ಸ್ವೀಕರಿಸಿದ ಅಧಿಸೂಚನೆಗಳ ಪ್ರಕಾರ, ನಮ್ಮ ಕಾರ್ಯನಿರ್ವಾಹಕರು ನಿಮ್ಮ ಸ್ಥಳಕ್ಕೆ ಪೂರ್ವನಿಗದಿತ ದಿನದಂದು ಬರುತ್ತಾರೆ ಮತ್ತು ನಿಮ್ಮ ಅಪ್ಲಿಕೇಶನ್ನಲ್ಲಿ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ದೃಢೀಕರಣ ಮಾಡಿಕೊಂಡ ನಂತರವಷ್ಟೇ ನಿಮ್ಮ ಸ್ಥಳದಿಂದ ಪೂಜೆ, ಮತ್ತು ನೋಂದಣಿ ಕೋಡ್ ಅನ್ನು ಅವರೊಂದಿಗೆ ಹಂಚಿಕೊಳ್ಳಲು ಆ್ಯಪ್ ಸೂಚಿಸುತ್ತದೆ.

ನಂತರ ಅವರು ಚಿತ್ರೀಕರಿಸಿದ ನೀವು ಮಾಡಿದ ಪೂಜೆಯ ಫೋಟೋ ಮತ್ತು ವೀಡಿಯೊವನ್ನು ಅಪ್ಲೋಡ್ ಮಾಡುತ್ತಾರೆ ಟ್ರಸ್ಟ್ ನಿಂದ ಘೋಷಿಸಲಾದ ಈ ವಿಧಾನಗಳನ್ನು ಅನುಸರಿಸಿ ಮಾಡುವ ಪೂಜೆಯು ಮಾತ್ರ ಅಧಿಕೃತವಾಗಿದೆ ಎಂದು ಪರಿಗಣಿಸಬೇಕು ಮತ್ತು ಭಕ್ತರು ಇದರಲ್ಲಿ ಯಾವುದೇ ವ್ಯತ್ಯಾಸಗಳಿದ್ದಲ್ಲಿ [email protected] ಗೆ ಇಮೇಲ್ ಮೂಲಕ ನಮ್ಮ ಗಮನಕ್ಕೆ ತರಲು ವಿನಂತಿಸಲಾಗಿದೆ.

ಅಲ್ಲದೆ ಪೂಜೆ ನಡೆಸಲು ಯಾವುದೇ ಶುಲ್ಕವಿಲ್ಲ. ಭಕ್ತರು ದಾನಕೊಡುಗೆ ನೀಡಲು ಬಯಸಿದರೆ, ನಮ್ಮ ಅಧಿಕೃತ ಆನ್ ಲೈನ್ ಸಂಪರ್ಕ ಸಾಧನ ಮೂಲಗಳಾದ ತರಂಗಿಣಿ ಆ್ಯಪ್ ಅಥವಾ ವೆಬ್ ಸೈಟ್ ನಿಂದ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ, ವೆಬ್ ಸೈಟ್ ನಲ್ಲಿ ನಮೂದಿಸಿರುವ ಟ್ರಸ್ಟ್ ನ ಬ್ಯಾಂಕ್ ವಿವರಗಳಿಗೆ ಪಾವತಿಸುವ ಮೂಲಕ, ಅಥವಾ ರೇಜರ್ ಪೇ ಮೂಲಕ ದೇಣಿಗೆ ನೀಡಬಹುದು.

ಈ ವಿಧಾನಗಳ ಹೊರತಾಗಿ ಇನ್ಯಾವುದೇ ಇತರ ಅನಧಿಕೃತ ಮೂಲಗಳಿಂದ ಬರುವ ನವೀಕರಣಗಳನ್ನು ನಿರ್ಲಕ್ಷಿಸಿ ಮತ್ತು ಅಂತಹ ಯಾವುದೇ ವಿಷಯಗಳು ಕಂಡುಬಂದಲ್ಲಿ ಕೂಡಲೇ ನಮ್ಮ ಗಮನಕ್ಕೆ ತರಬೇಕೆಂದು ವಿನಂತಿಸಿಕೊಳ್ಳುತ್ತೇವೆ.

ಮಹಾಪ್ರಸಾದಕ್ಕೆ Dress code

ಮಹಾಪ್ರಸಾದಕ್ಕೆ ಪೂಜೆ ಸಂಕಲ್ಪ ನೆರವೇರಿಸುವಾಗ ಪಾಲಿಸಬೇಕಾದ ಕ್ರಮಗಳು :
ಭಕ್ತರು ಪೂಜೆಯ ನಿಗದಿತ ದಿನದಂದು, ಸ್ನಾನಾದಿ ಮಡಿಗಳಿಂದ, ನಿರ್ಮಲವಾದ ಶ್ರದ್ಧಾಭಕ್ತಿ-ಭಾವಗಳಿಂದ, ತಮ್ಮ ಮನೆ-ಮನಗಳನ್ನು ಸಜ್ಜುಗೊಳಿಸಿ, ಶ್ರೀರಾಮನ ಸೇವೆಗಾಗಿ ಮೀಸಲಾಗಿರುವ ಮಹಾಪ್ರಸಾದವನ್ನು ಆಹ್ವಾನಿಸುವ ಸಂದರ್ಭದಲ್ಲಿ, ವಿಶೇಷ ಪೂಜಾ ಉಡುಗೆಯಲ್ಲಿರಬೇಕು. ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ಮತ್ತು ಹಬ್ಬದ ವಾತಾವರಣವನ್ನು ನಿರ್ಮಿಸಲು ವಿನಂತಿಸಿಕೊಳ್ಳುತ್ತೇವೆ.

ನೀವು ಮಾಡುವ ಪೂಜೆಯನ್ನು ವೀಡಿಯೊ ಮತ್ತು ಫೋಟೋ ಶೂಟ್ ಮಾಡಿ ಕೆಲವು ಚಾನೆಲ್ ಗಳು, ಸಾಮಾಜಿಕ ಮಾಧ್ಯಮಗಳು ಮತ್ತು ಟ್ರಸ್ಟ್ ನ ವೆಬ್ ಸೈಟ್ ಗಳಲ್ಲಿ ಪ್ರಸಾರ ಮಾಡಲಾಗುವುದರಿಂದ, ತಾವು ಆದ್ಯತೆಯಿಂದ ಉಡುಗೆಯ ಕ್ರಮವನ್ನು ಅನುಸರಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ.

ನಿಮ್ಮ ಮನೆಗಳಿಗೆ ಮಹಾಪ್ರಸಾದವನ್ನು ಒಳಗೊಂಡ ವಾಹನದಲ್ಲಿ ನಮ್ಮ ಸಿಬ್ಬಂದಿವರ್ಗವು ಪೂರ್ವನಿಗದಿತ ದಿನದಂದು ಬಂದು ತಲುಪುತ್ತದೆ. ಅಲ್ಲಿ ಮನೆಯವರು, ನೆರೆಹೊರೆಯವರು, ಸ್ನೇಹಿತರು ಸೇರಿ ಸಕಲ ಗೌರವಾದರಗಳಿಂದ ಮಹಾಪ್ರಸಾದವನ್ನು ಸ್ವಾಗತಿಸಿ, ಮೊದಲೇ ಸಿದ್ಧಪಡಿಸಿದ ಪೀಠದ ಮೇಲೆ ಪ್ರತಿಷ್ಠಾಪಿಸಿ, ನಾಮಸಂಕೀರ್ತನೆ- ಭಜನೆ ಇತ್ಯಾದಿಗಳೊಂದಿಗೆ ಪೂಜಿಸಿ ಸಂಕಲ್ಪ ಮಾಡಿಕೊಳ್ಳಿ. ನಂತರ, ಮಹಾಮಂಗಳಾರತಿಯೊಂದಿಗೆ ಬೀಳ್ಕೊಡುವ ವಿಧಿವಿಧಾನಗಳನ್ನು ಪಾಲಿಸಿ ಶ್ರೀರಾಮನ ಕೃಪೆಗೆ ಪಾತ್ರರಾಗಿ.