ABOUT SRI RAMAMRITA TARANGINI

'ಶ್ರೀ ರಾಮಾಮೃತ ತರಂಗಿಣಿ' ಎಂಬುದು ಶ್ರೀ ರಾಮಾಮೃತ ತರಂಗಿಣಿ ಟ್ರಸ್ಟ್ ನ ಒಂದು ಸಂಕಲ್ಪವಾಗಿದೆ. ಭರತಖಂಡದ ಅನೇಕ ಕುಟುಂಬಗಳ ಪ್ರಾರ್ಥನೆಯನ್ನು ತಮ್ಮ ದೂರದ ಉಪಸ್ಥಿತಿಯಿಂದಲೇ, ಶ್ರೀರಾಮಜನ್ಮಭೂಮಿಯ ದೇವಾಲಯದ ಆವರಣದಲ್ಲಿ ನೆರವೇರಲಿರುವ, ಮಹಾಯಾಗದಲ್ಲಿ ಭಾಗಿಯಾಗಲು ಸಾಧ್ಯವಾಗುವಂತಹ ಸುವರ್ಣ ಅವಕಾಶವನ್ನು ಒದಗಿಸುತ್ತಿದೆ. ಯಾಗದಲ್ಲಿ ಸಲ್ಲಿಸಲು ಸಿದ್ಧಪಡಿಸಿರುವ ಮಹಾಪ್ರಸಾದಕ್ಕೆ, ಕೋಟಿ ಕುಟುಂಬಗಳ ಸಂಕಲ್ಪ ಪ್ರಾರ್ಥನೆಗಳನ್ನು ಪಡೆದು, ಅಯೋಧ್ಯೆಗೆ ಸಾಗಿ ಆ ಭಗವಂತನ ಸಾಮೀಪ್ಯಸೇವೆಯನ್ನು ಒದಗಿಸುವ ಉದ್ದೇಶ ಹೊಂದಿದೆ.

ಭರತನು ಹೇಗೆ ಶ್ರೀರಾಮನ ಪಾದುಕೆಗಳನ್ನು ಸಿಂಹಾಸನದ ಮೇಲಿರಿಸಿ ಸಾಂಕೇತಿಕವಾಗಿ ರಾಮನ ಪರವಾಗಿ ರಾಮರಾಜ್ಯದ ಆಳ್ವಿಕೆ ನಡೆಸಿದನೋ ಹಾಗೆಯೇ, ಟ್ರಸ್ಟ್ ನ ವತಿಯಿಂದ ನಾವು, ರಾಮತಾರಕ ಮಂತ್ರ ಪಠಣೆಯ ಮೂಲಕ ಒಂದು ಕೋಟಿ ಕುಟುಂಬಗಳ ಸಂಕಲ್ಪಗಳಿಂದ ಕೂಡಿದ ಮಹಾಪ್ರಸಾದದ ಯಾತ್ರೆಯೊಂದಿಗೆ ರಾಮಜನ್ಮಭೂಮಿ ತಲುಪಿ, ಅಲ್ಲಿ ನಡೆಸುವ ಮಹಾಯಾಗದಲ್ಲಿ ವಿಶೇಷವಾಗಿ ಸ್ಥಾಪಿಸಲಾಗುವ ಮೂರ್ತಿಗೆ, ಎಲ್ಲರ ಪರವಾಗಿ, ಮಹಾಪ್ರಸಾದವನ್ನು ಬಳಸಿ ಅಭಿಷೇಕ, ಪೂಜಾರಾಧನೆಗಳನ್ನು ಸಕಲ ವಿಧಿವಿಧಾನಗಳಿಂದ ಸಾಂಕೇತಿಕವಾಗಿ ನೆರವೇರಿಸಲಾಗುತ್ತದೆ. ಹೀಗೆ ಮೂಲ ಸಂಕಲ್ಪದಂತೆ ಹಲವಾರು ಪ್ರತ್ಯೇಕ ಸಂಕಲ್ಪಗಳು ಕೂಡಿ, ಮಹಾಸಂಕಲ್ಪವಾಗಿ ಪ್ರಕಟವಾಗುತ್ತದೆ.

ತಾವೆಲ್ಲರೂ ಸ್ವಯಿಚ್ಛೆಯಿಂದ ಸರ್ವಂ ರಾಮಮಯಂ ಎಂಬ ಈ ಅಭಿಯಾನದಲ್ಲಿ ಭಾಗಿಯಾಗಲು, ಇದಕ್ಕಾಗಿಯೇ ಪ್ರತ್ಯೇಕವಾಗಿ ಅಭಿವೃದ್ಧಿಪಡಿಸಲಾದ “ತರಂಗಿಣಿ” ಮೊಬೈಲ್ ಆ್ಯಪ್ ನಲ್ಲಿ ನೋಂದಾಯಿಸಿಕೊಳ್ಳಿ. ಇದರ ಮೂಲಕ ಮಹಾ ಅಭಿಯಾನವನ್ನು ತಮ್ಮ ಮನೆಗಳಿಗೂ ಆಹ್ವಾನಿಸಿ, ನಿಮ್ಮ ಕುಟುಂಬವರ್ಗದವರಿಂದ ಪೂಜೆ ಮತ್ತು ಪ್ರಾರ್ಥನೆಗಳನ್ನು ಸ್ವೀಕರಿಸಿ, ಮಹಾಪ್ರಸಾದವು ಅದರ ಮುಂದಿನ ಪ್ರಯಾಣದ ಕಡೆಗೆ ಸಾಗುತ್ತದೆ.

ನೀವು ಭಗವಂತನಿಗೆ ಅರ್ಪಿಸಿದ ನಿಮ್ಮ ಪ್ರಾರ್ಥನೆಯ ಸಂಕೇತವಾಗಿ, ನಿಮ್ಮ ಪೂಜಾ ಕೊಠಡಿಯಲ್ಲಿ ಸ್ಥಾಪಿಸಿ, ದೈನಂದಿನ ಪೂಜೆಯನ್ನು ನೀಡಲು, ಮಹಾಪ್ರಸಾದದ ಮಾದರಿಯ “ಚಿಕಣಿ”ಯು, ಮಾರಾಟಕ್ಕೆ ಲಭ್ಯವಿದೆ.